ಸೀಗುರಿಯ, ಚಾಮರದ, ಮೇಗಪ್ಪ ಬೆಳ್ಗೊಡೆಯ |
ಭೋಗಹಡಪಿಗರ, ಪಡೆವಡೆ ದಾನವನು |
ಬೇಗ ಮಾಡುವುದು! ಸರ್ವಜ್ಞ
Music
Courtesy:
Transliteration
Sīguriya, cāmarada, mēgappa beḷgoḍeya |
bhōgahaḍapigara, paḍevaḍe dānavanu |
bēga māḍuvudu! Sarvajña
ಶಬ್ದಾರ್ಥಗಳು
ಬೆಳ್ಗೊಡೆ = ಬಿಳಿ ರೇಶಿಮೆಯ ಕೊಡೆ, ಶ್ವೇತಛತ್ರ; ಮೇಗಪ್ಪ = ಮೇಲೆ ಹಿಡಿಸಿಕೊಳ್ಳುವ ; ಸೀಗುರಿ, ಚಾಮರ = ಪಶುವಿನ ಕೂದಲಿನಿಂದ ಮಾಡಿ ಬಹುಮಾನಕ್ಕಾಗಿ ಬೀಸುವ ಚವರಿ; ಹಡಪಿಗರಭೋಗ = ತಾಂಬೂಲಾದಿ ಸಾಮಗ್ರಿಗಳನ್ನು ಹೋದಹೋದಲ್ಲಿ ಒಯ್ಯವ ಚಾಕರರ ಸುಖ.;