ವಚನ - 1135     
 
ಕೇಡನೊಬ್ಬಗೆ ಬಗೆದು ಕೇಡು ತಪ್ಪದು ತನಗೆ| ನೋಡಿ ಕೆಂಡವನು ಹಿಡಿದೊಗೆದು ನೋವನು| ಬೇಡಿ ಬಗೆದಂತೆ! ಸರ್ವಜ್ಞ