ಮೀರಿಬೆಳೆಯಲಿ ತನುವು ಆರುಬಣ್ಣವನುಡಿಸಿ |
ಮೂರುರುಚಿದೋರಿ ಮರಸಿ ತಾ ತನ್ನನು |
ತೋರದೇ ಹೋದ ಸರ್ವಜ್ಞ
Music
Courtesy:
Transliteration
Mīribeḷeyali tanuvu ārubaṇṇavanuḍisi |
mūrurucidōri marasi tā tannanu |
tōradē hōda sarvajña
ಶಬ್ದಾರ್ಥಗಳು
ಆರುಬಣ್ಣ = ಹುಟ್ಟುವುದು, ಇರುವುದು, ಬೆಳೆಯುವುದು, ಬದಲಾಗುವುದು, ಬಡವಾಗುವುದು, ಹಾಳಾಗುವುದು ಮುಂತಾದ ಷಡ್ವಿಕಾರಗಳು; ಮೀರಿ ಬೆಳೆಯಲಿ ತನುವು = ಇಂಥ ಶರೀರವು ಉತ್ತರೋತ್ತರವಾಗಿ ವರ್ಧಮಾನವಾಗಲಿ; ಮೂರು = ಸತ್ವ, ರಜಸ್ಸು, ತಮಸ್ಸು; ರುಚಿದೋರಿ ಮರಸಿ = ಜೀವಭಾವವನ್ನು ಮರಸಿ;