ಇಟ್ಟಾ ವಿಭೂತಿತಾ ಪಟ್ಟಗಟ್ಟಿರುತಿಕ್ಕು |
ಇಟ್ಟ ವಿಭೂತಿಯರಿಯದಡೆ ಸೀಳಿದಾ |
ಬಟ್ಟೆಯಂತಕ್ಕು ಸರ್ವಜ್ಞ
Music
Courtesy:
Transliteration
Iṭṭā vibhūtitā paṭṭagaṭṭirutikku |
iṭṭa vibhūtiyariyadaḍe sīḷidā |
baṭṭeyantakku sarvajña
ಶಬ್ದಾರ್ಥಗಳು
ಇಟ್ಟ+ಆ+ವಿಭೂತಿ= = ಗುರುವು ದೀಕ್ಷಾಕಾಲದಲ್ಲಿ ಬ್ರಹ್ಮಲಿಪಿಯನ್ನೊರಸಿ ಭಕ್ತನ ಹಣೆಯಲ್ಲಿಟ್ಟ ತ್ರಿಪುಂಡ ಶೋಭೆಯೇ ವಿಭೂತಿ ಎನಿಸುವುದು; ಪಟ್ಟಗಟ್ಟಿರು ತಿಕ್ಕು = ಒಪ್ಪುವ ವಿಭೂತಿಯ ನೊಸಲಿಂಗೆ ಪಟ್ಟಿಗಟ್ಟಿದರೆ ಮುಕ್ತಿ ಸಾಮ್ರಾಜ್ಯದೊಡೆತನಕ್ಕೆ ಪಟ್ಟಗಟ್ಟಿದಂತಾಯಿತಯ್ಯ; ವಿಭೂತಿಯರಿಯದೊಡೆ = ಅದು ಶಿವಪ್ರಕಾಶವೆಂದು ತಿಳಿಯದೆ ಧರಿಸಿದರೆ; ಸೀಳಾದಬಟ್ಟೆಯಂತಕ್ಕು = (ಮೂರು) ತುಂಡಾಗಿ ಸೀಳಿದ ಬಿಳಿ ಅರಿವೆಯಂತಿರುವುದು;